spot_img
spot_img
30 C
Hubli
Tuesday, October 4, 2022
HomeKannadaಸಂಭಾವ್ಯ ಮೂರನೇಯ ಅಲೆಯಲ್ಲಿ ೪.೮೦ ಲಕ್ಷಕ್ಕೂ ಅಧಿಕ ಮಕ್ಕಳ ರಕ್ಷಣೆಗೆ ಜಿಲ್ಲಾಡಳಿತ ಕ್ರಮ

ಸಂಭಾವ್ಯ ಮೂರನೇಯ ಅಲೆಯಲ್ಲಿ ೪.೮೦ ಲಕ್ಷಕ್ಕೂ ಅಧಿಕ ಮಕ್ಕಳ ರಕ್ಷಣೆಗೆ ಜಿಲ್ಲಾಡಳಿತ ಕ್ರಮ

ಧಾರವಾಡ: ಸಂಭಾವ್ಯ ಮೂರನೇ ಕೊವೀಡ್‌ ಅಲೆಯಲ್ಲಿ ಮಕ್ಕಳು ಭಾದಿತರಾಗ ಬಹುದೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ ಈ ಹಿನ್ನಲೆಯಲ್ಲಿ ಸಕಾ೯ರ ಎಲ್ಲ ರೀತಿಯಿಂದ ಮಕ್ಕಳು ಕೋವಿಡ್‌ ಸೊಂಕಿನಿಂದ ಭಾದಿತರಾಗದಿಗರುವಂತೆ ಮುನ್ನಚ್ಚೆರಿಕೆ ಕ್ರಮ ಕೈಗೊಳ್ಳುತ್ತಿದೆ.

ಜಿಲ್ಲೆಯಲ್ಲಿ ಸಂಭಾವ್ಯ ಮೂರನೇಯ ಅಲೆಯ ಹಿನ್ನಲೆಯಲ್ಲಿ ಜಿಲ್ಲೆಯ ೫ ತಾಲೂಕು ಆಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ೮೨ ಎನ್‌ಬಿಎಸ್‌ಯು ಬೆಡ್‌ಗಳನ್ನು ೧೭, ಎಸ್‌ ಎನ್‌ ಸಿಯು ಬೆಡ್‌ಗಳನ್ನು ೫೫ ಪಿ ಐಸಿಯು ಬೆಡ್‌ಗಳನ್ನು ೩೫ ಐಸಿಯು ಬೆಡ್‌ಗಳನ್ನು ಹಾಗೂ ೬೩೫ ಸಿಸಿ ಹಾಸಿಗಳ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ತಾಲೂಕಿನಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ೭೫ ಪರಿಣಿತ ಮಕ್ಕಳ ತಜ್ಞರನ್ನು ಗುರುತಿಸಲಾಗಿದೆ.

ಧಾರವಾಡ ಜಿಲ್ಲೆಯೊಂದರಲ್ಲೆ ೧,೪೩,೯೦೨ ಮಕ್ಕಳು ೦-೬ ವಷ೯ದೊಳಗಿನವರಾಗಿದ್ದಾರೆ. ೩,೩೬,೫೧೦ ಮಕ್ಕಳು ೬ ರಿಂದ ೧೬ ವಯಸ್ಸಿನವರಾಗಿದ್ದಾರೆ.

ಕೋವಿಡ್‌ ಮೊದಲ ಹಾಗೂ ದ್ವಿತೀಯ ಅಲೆಯಲ್ಲಿ ಸೊಂಕಿನಿಂದ ಭಾದಿತರಾದ ಮಕ್ಕಳು ೨,೬೨೨ ಇದರಲ್ಲಿ ಮೊದಲನೇಯ ಅಲೆಯಲ್ಲಿ ಒಟ್ಟು ೧,೪೭೯ ಮಕ್ಕಳು ಸೊಂಕಿಗೆ ಒಳಗಾಗಿದ್ದರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.

ಎರಡನೇಯ ಅಲೆಯಲ್ಲಿ ಮೂರು ಹಾಗೂ ಒಂದನೇಯ ಅಲೆಯಲ್ಲಿ ಒಂದು ಮಗು ಸೊಂಕಿನಿಂದ ಮೃತಪಟ್ಟಿವೆ.

೧೩೪ ಮಕ್ಕಳು  ಮೊದಲ ಹಾಗೂ ದ್ವಿತೀಯ ಅಲೆಯಲ್ಲಿ ಕೋವಿಡ್‌ ಸೊಂಕಿನಿಂದ ಅನಾಥರಾಗಿದ್ದಾರೆ.

ಜಿಲ್ಲಾ ಕೇಂದ್ರ ಮತ್ತು ತಾಲೂಕುಗಳಲ್ಲಿ ಮಕ್ಕಳು ಮತ್ತು ವಿಕಲಚೇತನರಿಗಾಗಿ ಒಟ್ಟು ೧೦ ಕ್ವಾರಂಟೈನ್‌ ಸೆಂಟರ್‌ಗಳನ್ನು ಗುರುತಿಸಿದ್ದು ಇದರಲ್ಲಿ ಒಟ್ಟು ೨೪೪ ಹಾಸಿಗೆಗಳನ್ನು ಮೀಸಲಿಡಲಾಗಿದೆ.

ಜಿಲ್ಲೆಯಲ್ಲಿ ಸುಮಾರು ೭೫ ಮಕ್ಕಳು ತೀವ್ರ ಅಪೌಷ್ಟಕತೆಯಿಂದ ಬಳಲುತ್ತಿದ್ದು, ಸಾಧಾರಣ ಅಪೌಷ್ಟಿಕತೆಯಿಂದ ೧೫,೫೪೮ ಮಕ್ಕಳು ಬಳಲುತ್ತಿದ್ದಾರೆ ಎಂದು ಇಲಾಖೆ ತಿಳಿಸಿದೆ.

spot_img

Son dies at Garba event, shocked dad passes away hours later

A 35-year-old man died of a heart attack while attending a Garba event in Maharashtra. His dad, who had rushed him to the hospital,...

Keshwapur police nab two accused, seize two bikes

Hubballi: The Keshwapur police have nabbed two accused on charges of lifting bikes. The police seized one Splendor and one Hero Honda Hunk from...

LEAVE A REPLY

Please enter your comment!
Please enter your name here

This is the title of the web page
This is the title of the web page