spot_img
spot_img
28 C
Hubli
Wednesday, December 7, 2022
HomeStateಮಳೆಯೂ ಮಳೆ ಕನಾ೯ಟಕದೊಳಗೆ ; ಇನ್ನೂ ಎಷ್ಟುದಿನ ಭಾರಿ ಮಳೆ ಮುಂದುವರೆಯಲಿದೆ? ಇಲ್ಲಿದೆ ಉತ್ತರ..

ಮಳೆಯೂ ಮಳೆ ಕನಾ೯ಟಕದೊಳಗೆ ; ಇನ್ನೂ ಎಷ್ಟುದಿನ ಭಾರಿ ಮಳೆ ಮುಂದುವರೆಯಲಿದೆ? ಇಲ್ಲಿದೆ ಉತ್ತರ..

ಉತ್ತರ ಕನಾ೯ಟಕದ ಹಲವೆಡೆ ಕೆಲವು ದಿನಗಳಿಂದ ಮಳೆಯೂ ಬಿಟ್ಟು ಬಿಡದೇ ಸುರಿಯುತ್ತಿದ್ದು ಗುರುವಾರ ಬೆಳಿಗ್ಗೆಯಿಂದ ಹಲವು ಜಿಲ್ಲೆಗಳಲ್ಲಿ ಮಧ್ಯಮದಿಂದ ಭಾರಿ ಮಳೆಯಾಗುತ್ತಿದೆ.

ಹವಾಮಾನ ಇಲಾಖೆ ಗುರುವಾರ ಭಾರಿ ಮಳೆ ಮುಂದುವರೆಯಲಿದೆ ಎಂದು ತಿಳಿಸಿದೆ. ಆದರೆ ನಾಳೆಯಿಂದ ಮೋಡ ಕವಿದ ಹಾಗೂ ತಂಪಾದ ವಾತಾವರಣ ಮುಂದುವರೆಯಲಿದ್ದು ಮುಂದಿನ ಮೂರ್ನಾಲ್ಕು ದಿನ ಜಿಟಿ ಜಿಟಿ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ.

ಹುಬ್ಬಳ್ಳಿ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಕೃಷಿ ಹಾಗೂ ಹವಾಮಾನ ತಜ್ಞ ಡಾ. ಆರ್‌ ಎಚ್‌ ಪಾಟೀಲ, ಕಳೆದ ೧೫ ದಿನದಿಂದ ಮೋಡಕವಿದ, ತಂಪಾದ ವಾತಾವರಣ ಹಾಗೂ ಸತತ ಮಳೆಯಿಂದಾಗಿ ರೈತರು ಆತಂಕಕ್ಕೆ ಈಡಾಗಿದ್ದಾರೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಅರಬ್ಬಿ ಸಮುದ್ರದಲ್ಲಿಯೂ ಕೂಡಾ ಮೋಡಗಳು ಅಲ್ಲಿಯೇ ನಿಂತು ಮುಂದುವರೆಯದೇ ಇರುವದರಿಂದ ವ್ಯಾಪಕವಾದ ಮಳೆಯಾಗುತ್ತಿದೆ.

ಶುಕ್ರವಾರದಿಂದ ಸಾಧಾರಣ ಹಾಗೂ ಹಗುರ ಮಳೆಯಾಗಲಿದೆ ಆದರೆ ಗುರುವಾರ ಮಾತ್ರ ವ್ಯಾಪಕವಾಗಿ ಭಾರಿ ಮಳೆಯಾಗಲಿದೆ. ಗುರುವಾರ ಉತ್ತರ ಒಳನಾಡಿನ ಧಾರವಾಡ, ಬೆಳಗಾವಿ, ಹಾವೇರಿ, ಬಾಗಲಕೋಟ, ವಿಜಯಪುರ ಹಾಗೂ ಕಲ್ಬುಗಿ೯ ಜಿಲ್ಲೆಗಳಿಗೆ ಯೆಲ್ಲೂ ಅಲಟ್‌೯ ನೀಡಲಾಗಿದ್ದು ಅಲಲ್ಲಿ ಭಾರಿ ಮಳೆಯಾಗಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಆರೆಂಜ್‌ ಅಲಟ್‌೯ ನೀಡಲಾಗಿದೆ ಇಲ್ಲಿ ಅತಿ ವ್ಯಾಪಕ ಹಾಗೂ ಭಾರಿ ಮಳೆಯಾಗಲಿದೆ ಎಂದಿದ್ದಾರೆ.

ಪಾಟೀಲ ಅವರು ಕಳೆದ ಮೂರ್ನಾಲ್ಕು ದಿನಗಳಿಂದ ಉತ್ತರ ಕನಾ೯ಟಕದ ಹಲವೆಡೆ ಸಂಚಾರ ಮಾಡಿದ್ದು ಅವರು ಹೇಳುವಂತೆ ಹಲವೆಡೆ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿದೆ ಮುಖ್ಯವಾಗಿ ಮೆಕ್ಕೆಜೋಳ. ರೈತರಿಗೆ ಹಲವಾರು ಉಪಯುಕ್ತ ಸಲಹೆಗಳನ್ನು ನೀಡಿರುವ ಅವರು, ಯಾವುದೇ ರಾಸಾಯನಿಕ ಸಿಂಪಡಿಸಲು ಈಗ ಮಳೆಯು ಅನವು ಮಾಡಿಕೊಡುತ್ತಿಲ್ಲ ಆದ್ದರಿಂದ ರೈತರು ಸ್ವಲ್ಪ ತಾಳ್ಮೆಯಿಂದ ಮಳೆಯು ಬಿಡವು ನೀಡುವವರೆಗೂ ಕಾಯುವುದು ಸೂಕ್ತ ಎಂದು ಹೇಳಿದ್ದಾರೆ.

ರಾಯಚೂರಿನ ನೇತಾಜಿ ನಗರದ ನಿವಾಸಿ ಅಜು೯ನ್‌ಸಿಂಗ್‌ ಠಾಕೂರ ಪತ್ರಿಕೆಯೊಂದಿಗೆ ಮಾತನಾಡಿ ಬುಧವಾರ ಸಂಜೆಯಿಂದ ರಾಯಚೂರಿನಾದ್ಯಂತ ಎಡಬಿಡದೇ ಮಳೆ ಸುರಿಯುತ್ತಿದ್ದು, ಬಿಸಿಲನಾಡು ಮಲೆನಾಡು ಆದ ಅನುಭವ ನೀಡುತ್ತಿದೆ ಎಂದರು.

ಸತತ ಮಳೆಯಿಂದಾಗಿ ದೈನಂದಿನ ಜೀವನ ವ್ಯತ್ಯಾಸವಾಗಿದ್ದು ರಾಯಚೂರಿಗರು ಮಳೆಯಿಂದ ಕೆಲಸ ಕಾಯ೯ಗಳಲ್ಲಿ ತೊಡಗಿಕೊಳ್ಳುವುದು ಕಷ್ಟವಾಗಿದೆ ಎಂದು ಅಜು೯ನ್‌ ಸಿಂಗ್‌ ಹೇಳಿದರು.

ಗದಗ ಜಿಲ್ಲೆಯಲ್ಲಿಯೂ ಸಹ ಉತ್ತಮ ಮಳೆಯಾಗುತ್ತಿದ್ದು ಬಿತ್ತನೆಗಾಗಿ ರೈತರು ಕಾಯುತ್ತಿದ್ದಾರೆ. ಹಲವಾರು ರೈತರು ಪತ್ರಿಕೆಯೊಂದಿಗೆ ಮಾತನಾಡಿ ಸತತ ಮಳೆಯಿಂದಾಗಿ ಹೊಲದಲ್ಲಿ ಕಾಲಿಡದಂತ ಪರಿಸ್ಥಿತಿ ನಿಮಾ೯ಣವಾಗಿದೆ ಎಂದರು.

ಬಾಗಲಕೋಟೆ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಎಂದು ಅಲ್ಲಿನ ಜನರು ನಮ್ಮೊಂದಿಗೆ ಮಾತನಾಡಿ ತಿಳಿಸಿದ್ದಾರೆ.

 

ಡಾ. ಆರ್‌ ಎಚ್‌ ಪಾಟೀಲ ಅವರು ರೈತರನ್ನು ಉದ್ದೇಶಿಸಿ ಮಾತನಾಡಿದ್ದು ಏನು ಹೇಳಿದ್ದಾರೆಂದು ನೋಡೋಣ.

 

 

 

Accident: Sindagi CPI Ravi Ukkund, his wife died on the spot

Kalaburgi: Sindagi Circle Inspector Ravi Ukkund, 43, and his wife Madhu, 40, were killed on the spot after the car in which they were...

Akhil’s body found, postmortem is going on

Hubballi: Finally, the police have found the dead boy of Akhil Mahajanshet in a sugarcane field in Devikoppa, near Kalaghatagi, said local sources. And...

LEAVE A REPLY

Please enter your comment!
Please enter your name here

This is the title of the web page
This is the title of the web page