spot_img
spot_img
spot_img
spot_img
30 C
Hubli
Thursday, September 29, 2022
HomeKannada "ಬಿಟ್ ಗೊಂದು ಪೊಲೀಸ್ ಮರ" ಯೋಜನೆಗೆ  ಚಾಲನೆ: ಗೋಕುಲ ರಸ್ತೆ ಠಾಣೆಯ ಸಿಬ್ಬಂದಿಗಳಿಂದ ವಿನೂತನ ಕಾಯ೯

 “ಬಿಟ್ ಗೊಂದು ಪೊಲೀಸ್ ಮರ” ಯೋಜನೆಗೆ  ಚಾಲನೆ: ಗೋಕುಲ ರಸ್ತೆ ಠಾಣೆಯ ಸಿಬ್ಬಂದಿಗಳಿಂದ ವಿನೂತನ ಕಾಯ೯

ಹುಬ್ಬಳ್ಳಿ : ವೃಕ್ಷ  ಸಂಪತ್ತು ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಕರ್ತವ್ಯ ಇರುವುದರಿಂದ ಮೊದಲಬಾರಿಗೆ ಹುಬ್ಬಳ್ಳಿಯಲ್ಲಿ   “ಬಿಟ್ ಗೊಂದು ಪೊಲೀಸ್ ಮರ ” ಎಂಬ ಯೋಜನೆಯನ್ನು  ಗೋಕುಲ ರಸ್ತೆಯ ಪೊಲೀಸ್ ಠಾಣಾ  ಪಿಐ  ಜೆ.ಎಂ ಕಾಲಿಮಿರ್ಚಿ ಹಾಗೂ ವಲಯ ಅರಣ್ಯ ಅಧಿಕಾರಿ ಶ್ರೀಧರ ತೆಗ್ಗಿನಮನಿ  ಈ ಯೋಜನೆಗೆ ಇಂದು ಕೊಲ್ಲೂರು ಲೇ ಔಟ್ ಹಾಗೂ ಅಕ್ಷಯ ಕಾಲೊನಿಯಲ್ಲಿ  ಚಾಲನೆ ಕೊಡಲಾಯಿತು.

 

ಯೋಜನೆ ಚಾಲನೆ ನೀಡಿದ ಗೋಕುಲ ರಸ್ತೆಯ ಠಾಣೆ ಇನಸ್ಪೆಕ್ಟರ್‌ ಎಂ.ಜೆ. ಕಾಲಿಮಿರ್ಚಿ, ಮನುಷ್ಯ ಮಾಡಿದ ತಪ್ಪಿಗೆ ಕೊರೊನಾದಂತಹ ರೋಗಗಳನ್ನು ತಂದುಕೊಂಡು, ನಿಸರ್ಗದ ಪರಿಸ್ಥಿತಿಯನ್ನು ಬಿಗಡಾಯಿಸಿಕೊಂಡು ,  ಉಸಿರಿಗೆ ಬೇಕಾದ ಆಮ್ಲಜನಕವನ್ನು ಖರೀದಿಸಿ ಬದುಕಬೇಕಾದಂತಹ ಸ್ಥಿತಿ ಬಂದಿದ್ದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ    ಮತ್ತು   ನಿಸರ್ಗ ಕೊಡುಗೆಯಾಗಿ ಕೊಟ್ಟರೊ ಆಮ್ಲಜನಕ  ನಾವು ಸರಿಯಾಗಿ ಬಳಿಸಿಕೊಂಡು ಆರೋಗ್ಯಪೂರ್ಣವಾಗಿ ಜೀವನ ನಡೆಸೋಣ ಎಂದು ತಿಳಿಸಿದರು.

೨

ವಲಯ ಅರಣ್ಯ ಅಧಿಕಾರಿಯಾದ ಶ್ರೀಧರ ತೆಗ್ಗಿನಮನಿ ,  ನಿಸರ್ಗದ ಜೊತೆ ನಾವು ಬದುಕಲು ಕಲಿಯಬೇಕು . ಪರಿಸರ ಉಳಿದರೆ ಮನುಷ್ಯನ ಬದುಕು ಹಸಿರು ಮತ್ತು ಉಸಿರು. ಹಸಿರು ಬೆಳಸಲು ನಾವು ಇಂತಹ ರಚನಾತ್ಮಕ ಕಾರ್ಯಕ್ರಮಗಳನ್ನು  ಹುಬ್ಬಳ್ಳಿ – ಧಾರವಾಡದಲ್ಲಿ ಹಮ್ಮಿಕೊಂಡಿರೇ ಅರಣ್ಯ ಇಲಾಖೆ ಯಾವಾಗಲೂ ನಿಮ್ಮ ಜೊತೆ ಕೈ ಜೋಡಿಸುತ್ತದೆ ಹಾಗು ಎಲ್ಲರ ಸಹಭಾಗಿತ್ವ ಇದಕ್ಕೆ ಬೇಕು ಎಂದು ಮಾತನಾಡಿದರು.

 

ದಿನದ ೨೪ ಗಂಟೆಯೂ ಕೆಲಸದ ಒತ್ತಡದಲ್ಲಿಯೂ ಸಹ  ಪೋಲಿಸ್ ಇಲಾಖೆ ಎಲ್ಲರ ಜೊತೆ ಜನಸ್ನೇಹಿ ಯಾಗಬೇಕು ಎಂಬ ನಿಟ್ಟಿನಲ್ಲಿ ಇಂತಹ ವಿನೂತನ ಯೋಜನೆ ರೂಪಿಸುವಲ್ಲಿ ಹುಬ್ಬಳ್ಳಿಯಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಂಡಿರುವುದು ಶ್ಲಾಘನಿಯ ಹಾಗೂ  ಗೋಕುಲ ರಸ್ತೆಯ ಪೊಲೀಸ್ ಠಾಣಾ ವ್ಯಾಪ್ತಿಯ ೬೮ ಬೀಟ್‌ಗಳ ಪೊಲೀಸರು ಇದರ ಮೇಲುಸ್ತುವಾರಿಯನ್ನು  ನೋಡಿಕೊಳ್ಳಲಿದ್ದಾರೆ , ಅರಣ್ಯ ಇಲಾಖೆ ‌ಹಾಗೂ ಸಾರ್ವಜನಿಕರು ಇದಕ್ಕೆ ಸಹಕಾರ ನೀಡಲಿದ್ದಾರೆ.

ಆಯಾ ಕಾಲೊನಿಯ ಪ್ರತಿಯೊಂದು ಬಿಟ್‌ನಲ್ಲಿ  ನೆಡುವ ಗಿಡವನ್ನು ಸಂರಕ್ಷಿಸುವ ಸಲುವಾಗಿ  “ಪೊಲೀಸ್ ಮರ ” ಎಂದು ನಾಮಕರಣ ಮಾಡುವುದು ‌ಸಹ ಈ ಯೋಜನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಯೋಜನೆಯ ಚಾಲನೆಯ ಸಹಕಾರದಲ್ಲಿ ಗ್ರಿನ್ ಕರ್ನಾಟಕದ ಅಸೋಸಿಯೇಷನ್ ಅಧ್ಯಕ್ಷ ಚೆನ್ನು ಹೊಸಮನಿ , ಕೊಲ್ಲೂರು ಲೇಔಟ್ ನ ಅಧ್ಯಕ್ಷ ಹಾಲಗತ್ತಿ ಎಸ್.ವಿ . ಪಟ್ಟಣಶೆಟ್ಟಿ , ಗಾನತರಂಗ ಅಧ್ಯಕ್ಷರಾದ ರವೀಂದ್ರ ರಾಮದುರ್ಗಕರ , ಶ್ರಿಕಾಂತ ಕಿರೆಸೂರ, ಅಕ್ಕಮ್ಮ ಹೆಗಡೆ, ಸುವರ್ಣ ಶೇಠ್, ಸುಧಾಕರ ಶೆಟ್ಟಿ, ವೀಣಾ ಪಾಲನಕರ ಹಾಗೂ ಪೋಲೀಸ್ ಮತ್ತು ಅರಣ್ಯ ಅಧಿಕಾರಿಗಳು ‌ಪಾಲ್ಗೊಂಡಿದ್ದರು.   ಡಾ.ವೀರೇಶ ಹಂಡಿಗಿ ಪ್ರಾಸ್ತಾವಿಕ ಮಾತನಾಡಿ ಸಭೆಯನ್ನು ನಿರೂಪಿಸಿದರು.     

 

spot_img

Greens oppose, trade, and industrial bodies want the Hubballi-Ankola Railway line project 

Hubballi: A seven-member central experts’ committee constituted by the National Board for Wildlife (NBWL) to study the feasibility of the proposed Hubbali-Ankola Railway line...

Bommai says everyone know who is doing Bharat Jodo, and who is doing Bharat Todo

Haveri: All know who is doing 'Bharath Jodo' and who's doing 'Todo', said Chief Minister Basavaraj Bommai. Replying to a reporter on KPCC President D.K.Shivakumar's...

LEAVE A REPLY

Please enter your comment!
Please enter your name here

This is the title of the web page
This is the title of the web page