spot_img
spot_img
24 C
Hubli
Friday, October 7, 2022
HomeCovid-`19ನೈಜ ಕೊರೋನಾ ವಾರಿಯರ್ ಡಾ.‌ಸಂಪತ್‌ಸಿಂಗ್ ರಂಗವಾಲೆ

ನೈಜ ಕೊರೋನಾ ವಾರಿಯರ್ ಡಾ.‌ಸಂಪತ್‌ಸಿಂಗ್ ರಂಗವಾಲೆ

ಕಾಯಕನಿಷ್ಠೆ ಸ್ವಭಾವದವರೆ ಹಾಗೆ, ತಾವಾಯಿತು ತಮ್ಮ ಕೆಲಸವಾಯಿತು ಎಂದಿದ್ದುಬಿಡುತ್ತಾರೆ. ಡಾ. ಸಂಪತ್‌ಸಿಂಗ್ ಕೂಡ ಇದೇ ಸಾಲಿಗೆ ಸೇರುತ್ತಾರೆ. ಹೀಗಾಗೇ ರಾಜಪೂತರಲ್ಲಿ ಬಹಳಷ್ಟು ಜನರಿಗೆ ಇವರ ಬಗ್ಗೆ ಅಷ್ಟಾಗಿ ತಿಳಿದಿಲ್ಲ ಎನ್ನಬಹುದು.

ಪೂರ್ಣ ಹೆಸರು ಡಾ.‌ಸಂಪತ್‌ಸಿಂಗ್ ರಂಗವಾಲೆ. ಬರೋಬ್ಬರಿ ೯ ತಿಂಗಳ ಕಾಲ ಮನೆ ಮುಖವನ್ನೇ ನೋಡದೆ ಕೊರೋನಾ ಸೋಂಕಿತರ‌ ಸೇವೆಯಲ್ಲಿ ತೊಡಗಿದ್ದ ವೈದ್ಯ. ಹೋಂ ಐಸೋಲೇಶನ್ ನಲ್ಲಿ ಚಿಕಿತ್ಸೆಯಲ್ಲಿ ಇದ್ದವರು ಆಸ್ಪತ್ರೆ ಹಾಸಿಗೆ ನೋಡುವಂತಾಗದೆ ಮನೆಯಲ್ಲೆ ಗುಣಮುಖರಾಗಿದ್ದಾರೆ ಎಂದರೆ‌ ಅದರಲ್ಲಿ ಇವರ ಪರಿಶ್ರಮ ಬೆಟ್ಟದಷ್ಟಿದೆ.

ಹೌದು. ಸುಮಾರು ೪೩ ವಯಸ್ಸಿನ ಎಂಡಿ ಕಮ್ಯೂನಿಟಿ ಮೆಡಿಸಿನ್‌ ಡಾಕ್ಟರ್‌ ಆಗಿರುವ ಸಂಪತ್‌ಸಿಂಗ್‌ ಎಲೆಮರೆಯ ಕಾಯಿಯಂತೆ ಕೋವಿಡ್ ಕಾಲದಲ್ಲಿ ಸೇವೆಗೈದವರು. ಈಗಲೂ ಅಷ್ಟೇ, ಪತ್ರಕರ್ತನಾಗಿ ಇವರ ಕಾರ್ಯಗಳನ್ನು ಬಲ್ಲೇನಾಗಿ ಹಿಂದೆಯೆ‌ ಅಕ್ಷರ ರೂಪಕ್ಕೆ ಇಳಿಸಲು ಮುಂದಾದಾಗ ಸಂಕೋಚದಿಂದ ನಿರಾಕರಣೆ ಮಾಡಿದ ವ್ಯಕ್ತಿ .

KLE 1
Dr Sampath Singh standing on the left during vaccination drive.

ನಾನೇನೂ ಜಾಸ್ತಿ ಮಾಡ್ತಿಲ್ಲ ನನ್ನ ಕೆಲಸ ಇದು, ರೋಗಿಗಳಿಗೆ ಸಹಾಯ ಮಾಡೋದು ನನ್ನ ಕರ್ತವ್ಯ ಅಷ್ಟೇ ಎಂದು ಬರೆಯೋದಕ್ಕೆ ಅಡ್ಡಿ ಪಡಿಸಿದ್ದರು. ಈ ಸಾರಿ ಅವರಿಂದ ಒತ್ತಾಯದ ಅಪ್ಪಣೆ ಪಡೆದೆ ನಾಲ್ಕು ಸಾಲು ಬರೆಯುತ್ತಿದ್ದೇನೆ.

ಈಗ ಧಾರವಾಡ ಜಿಲ್ಲೆಯಲ್ಲಿ ಹೊಂ ಐಸೋಲೇಷನ್‌ ನೋಡಲ್‌ ಅಧಿಕಾರಿಯಾಗಿಕಾಯ೯ನಿವ೯ಹಿಸುತ್ತಿರುವ ಇವರು, ಐಸೋಲೇಷನ್‌ ನಲ್ಲಿ ಇದ್ದವರಿಗೆ ಇವರು ಅಕ್ಷರಶಃ ವೈದ್ಯರ ನಾರಾಯಣೊ ಹರಿಃ ಎಂಬ ಸ್ಥಾನ ತಂಬಿದವರು ಎಂದರೆ ಖಂಡಿತ ಅತಿಶಯೋಕ್ತಿ ಅಲ್ಲ. ಸರ್ಕಾರ ತಮಗೆ ನೀಡಿದ್ದ ಹೋಂ ಐಸೋಲೇಷನ್‌ ನೋಡಲ್‌ ಅಧಿಕಾರಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಎರಡನೇಯ ಅಲೆಯಲ್ಲಿ ಹೋಂ ಐಸೋಲೇಷನ್‌ ನಲ್ಲಿದ್ದ ಬರೋಬ್ಬರಿ‌ ೫ಸಾವಿರ ರೋಗಿಗಳ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇವರ ಕೆಳಗೆ ೫೨ ತಂಡ ಕಾರ್ಯನಿರ್ವಹಿಸುತ್ತಿತ್ತು ಎಂದರೆ ಇವರ ಜವಾಬ್ದಾರಿ ಎಷ್ಟು ದೊಡ್ಡದಾಗಿತ್ತು ಎಂಬುದನ್ನು ನಾವು ಕಲ್ಪನೆ ಮಾಡಿಕೊಳ್ಳಬೇಕಷ್ಟೆ. ತಮ್ಮ ಕಾಯಕದಿಂದಲೇ ಧಾರವಾಡ ಜಿಲ್ಲೆಯಲ್ಲಿ ಸದ್ದು ಮಾಡಿದ್ದಾರೆ ಡಾ. ಸಿಂಗ್‌. ಹುಬ್ಬಳ್ಳಿ- ಧಾರವಾಡ ಜನರಿಗೆ ಇವರು ಹೋಂ ಐಸೋಲೇಷನ್‌ ಅಧಿಕಾರಿಯಾಗಿ ಮಾಡಿರುವ ಸೇವೆ ಬೆಟ್ಟದಷ್ಟು.

Sana 1
Dr Samapath Singh standing on the right during Covid vaccine drive in Sana College

ಕೋವಿಡ್‌ ಮೊದಲ ಅಲೆಯ ವೇಳೆಯಲ್ಲೂ ಇವರು ಇದೇ ಕಾಯಕ ನಿಷ್ಠೆ ಹಾಗೂ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದ್ದಾರೆ. ಎಲ್ಲರೂ ಮನುಷ್ಯರು ಎಂಬ ಒಂದೇ ದೃಷ್ಟಿಕೋನದಿಂದ ನೋಡುತ್ತ ಸಹಾಯ ಮಾಡುವ ಗುಣವೇ ಡಾ. ಸಂಪತ್‌ಸಿಂಗ್‌ ಅವರನ್ನು ಬೇರೆಯವರಿಂದ ವಿಭಿನ್ನವಾಗಿ ನಿಲ್ಲುವಂತೆ ಮಾಡುತ್ತದೆ.

೯ ತಿಂಗಳು ಮನೆ ದರ್ಶನವಿಲ್ಲ

ಕೋವಿಡ್‌ ಮೊದಲ ಅಲೆ ಎಲ್ಲರಿಗೂ ಮೊದಲ ಅನುಭವ. ಸಾಕಷ್ಟು ವೈದ್ಯರು ಮನೆಗೆ ಹೋಗದೆ ಕಾರ್ಯ ನಿರ್ವಹಿಸಿದ್ದರು. ಅಂದರೆ ಕಾರ್ಯದ ಒತ್ತಡವೂ ಅಷ್ಟಿತ್ತು. ಅಲ್ಲದೆ, ತಮ್ಮ ಪರಿವಾರವನ್ನು ಸೋಂಕಿನಿಂದ ರಕ್ಷಿಸಲು ಹೊರಗೆ ಉಳಿದು ಸೇವೆಯಲ್ಲಿದ್ದರು.‌ಡಾ ಸಂಪತ್‌ಸಿಂಗ್‌ ಕೂಡ ಸತತ ೯ ತಿಂಗಳು ಮನೆಗೆ ಹೋಗದೆ ರೋಗಿಗಳ ಶುಶ್ರೂಷಣೆ ಮಾಡುತ್ತಲೆ ಮನೆಯವರ ಒಳಿತಿಗಾಗಿ ಪ್ರಾರ್ಥಿಸಿದವರು.

ಮನೆಯವರ ಜತೆಗೆ ದಿನಕ್ಕೆ ಕೇವಲ ಕೆಲವು ನಿಮಿಷ ಮಾತ್ರ ವೀಡಿಯೋ ಕಾಲ್‌ ಮೂಲಕ ಸಂಪರ್ಕದಲ್ಲಿದ್ದರು. ಹೀಗಿರುವಾಗ ತಾವೇ ಸ್ವತಃ ಒಮ್ಮೆ ಕೋವಿಡ್‌ ಸೋಂಕಿಗೂ ಒಳಗಾದರು. ಆದರೆ ತಮ್ಮ ಸೇವಾಫಲದ ಪುಣ್ಯದಿಂದ ಸೋಂಕು ಸೋಲಿಸಿ ಮತ್ತೆ ಕರ್ತವ್ಯದಲ್ಲಿ ತೊಡಗಿದರು.

ಕೆಲಸದ ಒತ್ತಡ ಎಷ್ಟಿತ್ತು ಎಂದರೆ ಹೋಂ ಐಸೋಲೇಶನ್‌ ನಲ್ಲಿದ್ದ ರೋಗಿಗಳ ಆರೋಗ್ಯ  ಮಧ್ಯರಾತ್ರಿ ಏರುಪೇರಾಗಿ ಕರೆಮಾಡಿದರೂ ಬೇಸರಿಸಿಕೊಳ್ಳದೆ ಧೈರ್ಯವನ್ನು ತುಂಬುತ್ತಿದ್ದರು. ಗಂಭೀರ ಸ್ಥಿತಿಗೆ ತಲುಪಿದವರನ್ನು ತುರ್ತಾ‌ಗಿ ಆಸ್ಪತ್ರೆಗೆ ಸೇರಿಸುವ ಹೊಣೆಯೂ ಇವರದಾಗಿತ್ತು. ಹೀಗಾಗಿ ಪ್ರತಿಕ್ಷಣ ಜಾಗೃತರಾಗಿರಬೇಕಿತ್ತು.

ಈಗ ಕೋವಿಡ್ ತಗ್ಗಿದೆ. ಆದರೆ ಸೋಂಕು ತಗುಲಿ ಗುಣಮುಖರಾದವರು ಇವರ ಸೇವೆ ಮರೆತಿಲ್ಲ. ತಾವಾಗೆ ಕರೆ ಮಾಡುತ್ತಾರೆ. ಪರಿಚಯ ಹೇಳಿಕೊಳ್ಳುತ್ತಾರೆ. ನಿಮ್ಮಿಂದ ಜೀವ ಉಳಿದಿದೆ ಎನ್ನುತ್ತಾರೆ. ಡಾ. ಸಂಪತ್‌ಸಿಂಗ್‌ ಧನ್ಯತಾ ಭಾವದಿಂದ ತಮ್ಮ ಕರ್ತವ್ಯ ಮಾಡಿದ್ದೇನೆ ಅಷ್ಟೇ ಎನ್ನುತ್ತ ನಮಸ್ಕಾರ ತಿಳಿಸುತ್ತಾರೆ.

ಅವರ ಕಾರ್ಯಗಳ ಬಗ್ಗೆ ಬಲ್ಲವರು ಹೇಳೋದು ಒಂದೇ ಮಾತು ಈ ವ್ಯಕ್ತಿಗೆ ಸಹನೆ, ತಾಳ್ಮೆ ಒಂದಿಷ್ಟು ಹೆಚ್ಚಿವೆ. ಸಂಪತ್‌ಸಿಂಗ್‌ ಬಹಳಷ್ಟು ಕೋವಿಡ್ ರೋಗಿಗಳಿಗೆ ಕೈಮೀರಿ ಸಹಾಯಮಾಡಿದ್ದಾರೆ. ಡಾ.ಸಿಂಗ್ ಕೋವಿಡ್‌ ಸೇವೆ ಸುತ್ತ ಹಲವು ವಿಶಿಷ್ಟ ಅನುಭವ ಸುತ್ತಿಕೊಂಡಿದೆ. ಅವೆಲ್ಲ ಬರೆಯುತ್ತ ಸಾಗಿದರೆ ಅದು ಪುಟಗಳು ಭರ್ತಿಯಾಗುತ್ತದೆ. ಪೆನ್ನಿನ ಶಾಯಿ ಇಂಗುತ್ತದೆ.

ಇಂತಹ ವೈದ್ಯ ನಮ್ಮ ರಾಜಪೂತ ಸಮಾಜದವದರು ಎನ್ನುವುದೇ ಒಂದು ಹೆಮ್ಮೆ, ರಾಜಪೂತರಲ್ಲಿ ಇಂತಹವರ ಸಂಖ್ಯೆ ಇನ್ನೂ ಹೆಚ್ಚಾಗಲಿ.

—–
ಗಣಿತ ಶಿಕ್ಷಕ ಶಾರ್ದೂಲ್‌ಸಿಂಗ್‌ ಹಾಗೂ ವಿದ್ಯಾಬಾಯಿ ಅವರ ಮಗ ಡಾ. ಸಂಪತ್‌ಸಿಂಗ್‌. ಪ್ರಾಥಮಿಕ ಶಿಕ್ಷಣ, ಕಾಲೇಜು ಶಿಕ್ಷಣ ಬೆಂಗಳೂರಿನಲ್ಲಿ ಮುಗಿಸಿದ ಇವರು ಎಂಬಿಬಿಎಸ್‌ ಹಾಗೂ ಎಂಡಿ ಪದವಿಯನ್ನು ಕಿಮ್ಸ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹುಬ್ಬಳ್ಳಿಯಿಂದ ಪೂರೈಸಿದ್ದಾರೆ.

spot_img

Unanimous decision to hike reservation for Scheduled Castes to 17 per cent, Scheduled Tribes to 7 per cent: CM Bommai

Bengaluru, Oct.7:It has been unanimously decided to hike reservation for the Scheduled Castes from 15 per cent to 17 per cent and the Scheduled...

SURYADEVOBHAVA: Sunlight is a ray of hope for “Vitamin D” deficiency

In the fast-paced life and humdrum of modern life, pretending a lack of time, the current generation is not attending to basic bodily needs...

LEAVE A REPLY

Please enter your comment!
Please enter your name here

This is the title of the web page
This is the title of the web page