spot_img
spot_img
25 C
Hubli
Saturday, December 10, 2022
HomeKannadaನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ; ವ್ಯಕ್ತಿ ಪರಿಚಯ

ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ; ವ್ಯಕ್ತಿ ಪರಿಚಯ

ಬಸವರಾಜ್ ಬೊಮ್ಮಾಯಿ

ಜನನ: 18-1-1960

ಜನ್ಮ ಸ್ಥಳ: ಹುಬ್ಬಳ್ಳಿ

ತಂದೆ:ಎಸ್.ಆರ್.ಬೊಮ್ಮಾಯಿ(ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ)

ತಾಯಿ: ಗಂಗಮ್ಮ ಎಸ್ ಬೊಮ್ಮಾಯಿ

ಧರ್ಮ ಪತ್ನಿ: ಚನ್ನಮ್ಮ ಪಿ ಬೊಮ್ಮಾಯಿ

ವಿದ್ಯಾಭ್ಯಾಸ: ರೋಟರಿ ಇಂಗ್ಲಿಷ್ ಶಾಲೆಯಲ್ಲಿ ಹುಬ್ಬಳ್ಳಿಯಲ್ಲಿ ಪ್ರಾಥಮಿಕ / ಮಾಧ್ಯಮಿಕ ಶಿಕ್ಷಣ,

ಪಿಯುಸಿ: ಪಿ.ಸಿ
ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅಧ್ಯಯನ,

ಪದವಿ ಶಿಕ್ಷಣ:ಬಿ. ವ್ಹಿ. ಬೂಮರೆಡ್ಡಿ ತಾಂತ್ರಿಕ ‌ಮಹಾವಿದ್ಯಾಲಯದಲ್ಲಿ ಮೆಕಾನಿಕಲ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ.

ಪ್ರಾರಂಭದ ಉದ್ಯೋಗ: ಕೈಗಾರಿಕ ಉದ್ಯಮಿ ಹಾಗೂ 1983-85 ರವರಗೆ, ಪುಣೆ ಟೆಲ್ಕೋ ಕಂಪನಿಯಲ್ಲಿ ಎರಡು ವರ್ಷಗಳ ತಾಂತ್ರಿಕ ತರಬೇತಿ,ನಂತರ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಸ್ವಂತ ಉದ್ಯೋಗ ಸ್ಥಾಪನೆ.

ಸಾಮಾಜಿಕ ಹಾಗೂ ರಾಜಕೀಯ ರಂಗ: ಕಾಲೇಜು ವಿದ್ಯಾಭ್ಯಾಸ ದಿನದಿಂದಲೇ ಸಾಮಾಜಿಕ ಮತ್ತು ರಾಜಕೀಯ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹಾಗೂ ಸಂಘಟನೆಗಳಲ್ಲಿ ಸತತ ಪ್ರಯತ್ನ.

1993 ರಲ್ಲಿ ಹುಬ್ಬಳ್ಳಿ ‌ನಗರದಲ್ಲಿ ರಾಜ್ಯ ಯುವ ಜನತಾ ದಳದ ಐತಿಹಾಸಿಕ ಬೃಹತ್ ರ್ಯಾಲಿಯ ಸಂಘಟನೆ ನೇತೃತ್ವ,

1995 ರಲ್ಲಿ ಈದ್ಗಾ ಮೈದಾನದಲ್ಲಿ ಶಾಶ್ವತ ಸಮಸ್ಯೆಗೆ ಪರಿಹಾರಕ್ಕೆ ರಾಜ್ಯ ಸರಕಾರದ ಮೂಲಕ ಪ್ರಯತ್ನ.

ಪಕ್ಷದಲ್ಲಿ ಮೊದಲ ಸ್ಥಾನ: 1995 ರಲ್ಲಿ ರಾಜ್ಯ ಜನತಾ ದಳದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
2007 ರ ಜುಲೈನಲ್ಲಿ ಧಾರವಾಡದಿಂದ ನರಗುಂದದ ವರೆಗೂ 232 ಕಿ.ಮಿ. 21 ದಿನಗಳ ಕಾಲ ಬೃಹತ್ ರೈತರೊಂದಿಗೆ ಪಾದಯಾತ್ರೆ.

ರಾಜಕೀಯ ಸ್ಥಾನಮಾನ:1996 ರಿಂದ 1997 ರವಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜಿ.ಎಚ್.ಪಟೇಲ್ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ,

31-12-1997 ಹಾಗೂ 4-12-2003 ರಲ್ಲಿ ರಾಜ್ಯ ವಿಧಾನ ಪರಿಷತ್ಗೆ ಸ್ಥಳೀಯ ಸಂಸ್ಥೆಗಳಿಂದ (ಧಾರವಾಡ, ಹಾವೇರಿ, ಗದಗ) ನಡೆದ ಚುನಾವಣೆಯಲ್ಲಿ ಸತತ ಎರಡು ಬಾರಿ ‌ಪರಿಷತ್ ಸದಸ್ಯರಾಗಿ ಆಯ್ಕೆ.

22-05-2008 ರಂದು ರಾಜ್ಯ ವಿಧಾನಸಭೆ ‌ನಡೆದು ಚುನಾವಣೆಯಲ್ಲಿ ಹಾವೇರಿ ಜಿಲ್ಲಾ ಶಿಗ್ಗಾವಿ ವಿಧಾನ ಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆ.

ಹಿಂದಿನ ಬಿಜೆಪಿ ಸರಕಾರದಲ್ಲಿ ಬಿ.ಎಸ್.ಯಡಿಯೂರಪ್ಪ/ ಡಿ.ವ್ಹಿ, ಸದಾನಂದಗೌಡ/ಜಗದೀಶ ಶೆಟ್ಟರ ಸಂಪುಟಗಳಲ್ಲಿ 5 ವರ್ಷಗಳ ಕಾಲ ಜಲಸಂಪನ್ಮೂಲ ಸಚಿವರಾಗಿ ಸೇವೆ.

2013 ಹಾಗೂ 2018 ವಿಧಾನ ಸಭಾ ಚುನಾವಣೆ ಗೆಲುವು ಸಾಧಿಸುವ ಮೂಲಕ ಮೂರು ಬರಿ ಹ್ಯಾಟ್ರಿಕ್ ಶಾಸಕರಾಗಿ ಆಯ್ಕೆ.

ಸಧ್ಯ ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕನೆಯ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಮೇಲೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಬಸವರಾಜ್ ಬೊಮ್ಮಾಯಿ ಸೇವೆ ಸಲ್ಲಿಸಿದ್ದಾರೆ…

Karnataka-Maharashtra Border Row: Karnataka MPs to Meet Amit Shah

Bengaluru: Following the Maharashtra MPs' meeting with Union Home Minister Amit Shah in Delhi, the Karnataka MPs will meet him in Delhi on Monday...

A gang attacks bakery workers in Bengaluru; video goes viral

Bengaluru: Around Thursday midnight, a gang assaulted two bakery workers over a minor dispute outside Kundalahalli Gate in the HAL Police Station limits. The incident...

LEAVE A REPLY

Please enter your comment!
Please enter your name here

This is the title of the web page
This is the title of the web page