spot_img
spot_img
spot_img
spot_img
30 C
Hubli
Thursday, September 29, 2022
HomeKannadaಚಂದರಗಿ ಕಂಡಂತೆ ಮುಖ್ಯಮಂತ್ರಿ ಬೊಮ್ಮಾಯಿ

ಚಂದರಗಿ ಕಂಡಂತೆ ಮುಖ್ಯಮಂತ್ರಿ ಬೊಮ್ಮಾಯಿ

ಈಗ ಕನಾ೯ಟಕದಲ್ಲಿ ಎಲ್ಲೆಲ್ಲೂ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಚಚೆ೯ ನಡೆಯುತ್ತಿವೆ. ಬೊಮ್ಮಾಯಿಯವರಿಗೆ ಏನು ಇಷ್ಟ?, ಬೊಮ್ಮಾಯಿಯವರ ಗೆಳೆಯರಾರು? ಬೊಮ್ಮಾಯಿ ಓದಿದ್ದೆಲ್ಲಿ? ರಾಜಕೀಯ ಪಯಣ ಇತ್ಯಾದಿ ಇತ್ಯಾದಿ. ಜನರಲ್ಲಿಯೂ ಸಹ ನೂತನ ಮುಖ್ಯಮಂತ್ರಿಯ ಬಗ್ಗೆ ತಿಳಿದುಕೊಳ್ಳುವ ತವಕ.

ಈ ಹಿನ್ನಲೆಯಲ್ಲಿ, ಬೆಳಗಾವಿಯ ಕನ್ನಡ ಪರ ಹೋರಾಟಗಾರ, ಲೇಖಕ ಅಶೊಕ ಚಂದರಗಿ ತಮ್ಮ ಹಾಗೂ ಬೊಮ್ಮಾಯಿಯವರ ನಡುವಿನ ಗೆಳೆತನದ ಬಗ್ಗೆ ಹಂಚಿಕೊಂಡಿದ್ದಾರೆ. ಮುಂದಿನದ್ದು ಅವರ ಭಾಷೆಯಲ್ಲಿಯೇ…

ದೀರ್ಘ ಕಾಲದ ಗೆಳೆಯರೊಬ್ಬರು ಮುಖ್ಯಮಂತ್ರಿ ಖುರ್ಚಿಯ ಮೇಲೆ ಕುಳಿತ ಸಂತಸದಲ್ಲಿ ನಾಲ್ಕು ಮಾತು, ನಾಲ್ಕಾರು ನೆನಪುಗಳು….

ಈ ಘಳಿಗೆಯನ್ನು ನಾನು ದೀರ್ಘ ಕಾಲದಿಂದಲೂ ಕಾಯುತ್ತಲೇ ಇದ್ದೆ.ಈ ರಾಜ್ಯವನ್ನು ಸುಮಾರು ವರ್ಷಗಳ ಕಾಲ
ಆಳಿದ ಜನತಾ ಪರಿವಾರದ ದಿನಗಳಿಂದಲೂ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ(ಗೆಳೆಯರ ಬಳಗದಲ್ಲಿ ಪ್ರೀತಿಯ “ಬಸಣ್ಣ”)ನನ್ನ ಗೆಳೆತನ.ಅವರ ಜೊತೆಗೆ ಸೇರಿ ಅನೇಕ ಚುನಾವಣೆಗಳಲ್ಲಿ ನಾನು ಸಕ್ರೀಯವಾಗಿ ಕೆಲಸ ಮಾಡಿದ್ದೇನೆ.ಅವರೇ ಕಾರು ಡ್ರೈವ್ ಮಾಡುವಾಗ ನಾನೇ ಎಡಬದಿಗೆ ಕುಳಿತು ಸುತ್ತಿದ್ದೇನೆ.ಇಬ್ಬರನ್ನೂ ಇನ್ನಷ್ಟು ಸಮೀಪ ತಂದಿದ್ದು 2002 ರಲ್ಲಿ ನಡೆದ ಕಳಸಾ ಬಂಡೂರಿ ಮಹಾದಾಯಿ ನದಿ ತಿರುವು ಯೋಜನೆಯ ಹೋರಾಟ. ಹೋರಾಟ ಸಮಿತಿಗೆ ಅವರು
ರಾಜ್ಯ ಸಂಚಾಲಕರಾದರೆ ನಾನು ಬೆಳಗಾವಿ ಜಿಲ್ಲಾ ಸಮಿತಿಯ ಸಂಚಾಲಕ.ನಿರಂತರ ಹೋರಾಟ.ಈ ಸಂದರ್ಭದಲ್ಲಿ ಅವರು
200 ಕಿ.ಮೀ.ನಷ್ಟು ಕಾಲ್ನಡಿಗೆ ಮಾಡಿ ಹೋರಾಟಕ್ಕೆ ಮತ್ತಷ್ಟು ಸ್ಪೂರ್ತಿ ತುಂಬಿದವರು.

ಒಮ್ಮೆ ಹುಬ್ಬಳ್ಳಿಯ ಹೊಟೆಲ್ ಆವರಣದಲ್ಲಿ ಹೋರಾಟ ಸಮಿತಿಯ ಸಭೆ ನಡೆದಿತ್ತು.ಅವರ ಚಿಕ್ಕ,ಚಿಕ್ಕ ಭಾಷಣ:” ಒಂದಿಲ್ಲೊಂದು ದಿನ ಈ ರಾಜ್ಯದ ಚುಕ್ಕಾಣಿ ಹಿಡಿಯುತ್ತೇನೆಂದು ನನಗೆ ಒಬ್ಬ ಜ್ಯೋತೀಷಿ ಹೇಳಿದ್ದಾರೆ.ಕಾದು
ನೋಡೋಣ.ಆದರೆ ನಮಗೆಲ್ಲ ಜನಪರ ಹೋರಾಟವೇ ಮುಖ್ಯ”ಎಂದರು ಬಸಣ್ಣ!

ಜನತಾ ದಳದ ಅವಸಾನ ಮತ್ತು ರಾಮಕೃಷ್ಣ ಹೆಗಡೆಯವರ ನಿಧನದ ನಂತರ ರಾಜ್ಯದಲ್ಲಿ ನಡೆದ ರಾಜಕೀಯ ಧ್ರುವೀಕರಣದಲ್ಲಿ ಅವರು ಬಿಜೆಪಿ ಯತ್ತ ಮುಖಮಾಡಿದರು.2008 ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿಯಿಂದ ಆಯ್ಕೆಗೊಂಡರು.ಆರಿಸಿ ಬಂದ ಮೂರನೇ ದಿನಕ್ಕೆ ಫೋನಿನಲ್ಲಿ ಸಿಕ್ಕರು.ಅಭಿನಂದಿಸಿದೆ.”ನೀವು ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗುತ್ತೀರಿ” ಎಂದೆ.ಬಸಣ್ಣನಿಗೆ ಸಿಟ್ಟು ಬಂತು.”ನೀನು ಭಾಳ ಅಗಾವ ಇದ್ದೀ.ಸುಮ್ನೆ ಏನಾದರೂ ಹೇಳ್ಕೊಂತ ಹೋಗಬ್ಯಾಡಾ. ನನಗಿಂತಲೂ ಹಿರಿಯರು ಇದ್ದಾರೆ”ಎಂದರು. ಮಂತ್ರಿಯೂ ಆದರು.ನೀರಾವರಿ
ಖಾತೆಯನ್ನೂ ಪಡೆದರು.ಮೇಲಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಬಂದರು.ಅವರನ್ನು ಸ್ವಾಗತಿಸಲು ನಾನೇ ಇಪ್ಪತ್ತು ಗೆಳೆಯರನ್ನು ಕರೆದುಕೊಂಡು ಐಬಿ ಗೆ ಹೋಗಿದ್ದೆ!

ಬಸವರಾಜರು ಆಳವಾದ ಅಭ್ಯಾಸಿ. ಮೃದು ಸ್ವಾಭಾವ.ನೆರವಾಗುವ ಸ್ವಭಾವ ಅವರ ತಂದೆ ದಿವಂಗತ ಮುಖ್ಯಮಂತ್ರಿ ಎಸ್ .ಆರ್.ಬೊಮ್ಮಾಯಿ ಅವರಿಂದಲೇ ರಕ್ತಗತವಾಗಿ ಬಂದಂತಿದೆ.ಏನೇ ನಿರ್ಧಾರ ಕೈಗೊಳ್ಳುವ ಮುನ್ನ ಅಳೆದು ತೂಗಿ ನೋಡುತ್ತಾರೆ.ಯಾರನ್ನೊ ಪ್ಲೀಜ್ ಮಾಡಲು ತಪ್ಪು ನಿರ್ಧಾರ ಕೈಗೊಳ್ಳುವವರಲ್ಲ.

ಅವರನ್ನು ನಾನು ಕೊನೆಗೆ ಭೆಟ್ಟಿಯಾಗಿದ್ದು 2018 ರ ಧಾರವಾಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ.ಅವರೂ ಭಾಷಣ ಮಾಡಲು ಬಂದಿದ್ದರು.ನನ್ನ ಮಾತುಗಳೂ ಅಲ್ಲಿದ್ದವು.ಯಡಿಯೂರಪ್ಪ ಸರಕಾರದಲ್ಲಿ ಅವರು ಗೃಹಸಚಿವರಾದ ನಂತರ ನಿತ್ಯ ವ್ಯಾಟ್ಸಪ್ ಮೂಲಕವೇ ಸಂದೇಶಗಳ ವಿನಿಮಯ ಇದ್ದೇ ಇದೆ.

ಅವರು ಒಂದಿಲ್ಲೊಂದು ದಿನ ಈ ರಾಜ್ಯದ ಸಿಎಮ್ ಆಗಿಯೇ ಆಗುತ್ತಾರೆಂಬ ನಿರೀಕ್ಷೆ ನನ್ನಂಥ ಹಿತಚಿಂತಕರಿಗೆ ಇದ್ದೇ ಇತ್ತು.ಈಗ ಆ ಕಾಲ ಕೂಡಿ ಬಂತಷ್ಟೆ.ಅವರಿಗೆ ಶುಭಾಶಯ ಕಳಿಸಿದ್ದೇನೆ.ಬೆಂಗಳೂರಿಗೆ ಹೋಗಿ ಭೆಟ್ಟಿಯಾಗುತ್ತೇನೆ.ಆದರೆ ಅಲ್ಲಿಯ ಗರದಿ ಸ್ವಲ್ಪ ಕಡಿಮೆಯಾದ ನಂತರ ಹೋಗುತ್ತೇನೆ.ರಾಜ್ಯದ ನೆಲ,ಜಲ,ಭಾಷೆಯ ಬಗ್ಗೆ ,ತಮ್ಮ ತಂದೆಯಂತೆ,ಅಪಾರ ಅಭಿಮಾನ ಇಟ್ಟುಕೊಂಡಿರುವ ಬಸಣ್ಣರಿಗೆ ಸ್ವಲ್ಪ ಮುಕ್ತ ಅವಕಾಶ ಸಿಗಬೇಕಷ್ಟೆ.ಸಿಕ್ಕರೆ ಅವರು ಕರ್ನಾಟಕದಲ್ಲಿ “ಬದಲಾವಣೆ ಬಸಣ್ಣ”ಆಗಬಲ್ಲರೆಂಬ ವಿಶ್ವಾಸ ನನಗಿದೆ.

ಅಶೊಕ ಚಂದರಗಿ

ಬಸವರಾಜ ಬೊಮ್ಮಾಯಿ
ಅವರಿಗೆ ಬೆಳಗಾವಿ ಜಿಲ್ಲಾ ಕನ್ನಡ
ಸಂಘಟನೆಗಳ ಕ್ರಿಯಾ ಸಮಿತಿ ಮತ್ತು
ಇತರ ಕನ್ನಡ ಸಂಘಟನೆಗಳ ಪರವಾಗಿ
ಅಭಿನಂದನೆಗಳು.

ಅಶೋಕ ಚಂದರಗಿ
ಅಧ್ಯಕ್ಷರು,ಕನ್ನಡ ಕ್ರಿಯಾ ಸಮಿತಿ
ಹಾಗೂ ಹಿರಿಯ ಪತ್ರಕರ್ತ

spot_img

Greens oppose, trade, and industrial bodies want the Hubballi-Ankola Railway line project 

Hubballi: A seven-member central experts’ committee constituted by the National Board for Wildlife (NBWL) to study the feasibility of the proposed Hubbali-Ankola Railway line...

Bommai says everyone know who is doing Bharat Jodo, and who is doing Bharat Todo

Haveri: All know who is doing 'Bharath Jodo' and who's doing 'Todo', said Chief Minister Basavaraj Bommai. Replying to a reporter on KPCC President D.K.Shivakumar's...

LEAVE A REPLY

Please enter your comment!
Please enter your name here

This is the title of the web page
This is the title of the web page