spot_img
spot_img
28 C
Hubli
Wednesday, December 7, 2022
HomeKannadaಗುರು ಪೂಣಿ೯ಮೆಗೆ ವಿಶೇಷ ಅಲಂಕಾರ ಸಾಯಿಬಾಬಾ ದೇವಸ್ಥಾನಕ್ಕೆ ಈ ರೀತಿ ಅಲಂಕಾರ ಕೇಳಿರಲು, ನೋಡಿರಲು ಸಾಧ್ಯವೇ...

ಗುರು ಪೂಣಿ೯ಮೆಗೆ ವಿಶೇಷ ಅಲಂಕಾರ ಸಾಯಿಬಾಬಾ ದೇವಸ್ಥಾನಕ್ಕೆ ಈ ರೀತಿ ಅಲಂಕಾರ ಕೇಳಿರಲು, ನೋಡಿರಲು ಸಾಧ್ಯವೇ ಇಲ್ಲ.

ಬೆಂಗಳೂರು: ಗುರುಪೂರ್ಣಿಮೆ ಅಂಗವಾಗಿ ಇಂದು ಜೆಪಿ ನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು, ಬಹುಷಃ ಈ ರೀತಿಯ ಅಲಂಕಾರ ಎಂದು ಮಾಡಿರಲೇ ಇಲ್ಲ, ಇದನ್ನು ಯಾರು ನೋಡಿರಲು ಸಾಧ್ಯವೇ ಇಲ್ಲ ಯಾಕೆಂದರೆ ನೂರು ವಷ೯ಗಳಿಗೆ ಒಮ್ಮೆ ಬರುವ ಕೋವಿಡ್‌ನಂತಹ ಮಾರಕ ಹಿಂದೆ ಬಂದಿರಲಿಲ್ಲ.

ಗುರುಪೂರ್ಣಿಮೆ ಅಂಗವಾಗಿ ಇಂದು ಜೆಪಿ ನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್‌, 2 ಸಾವಿರ ಸ್ಯಾನಿಟೈಸರ್‌ ಬಳಸಿ ವಿಶೇಷ ಅಲಂಕಾರ ಮಾಡಿರುವುದನ್ನ ಕಂಡು ಭಕ್ತಾದಿಗಳು ಪುಳಕಿತರಾದರು.

ಕರೋನಾ ಮೂರನೇ ಅಲೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಹಾಗೂ ವಿಶೇಷ ವಾದ ಆಲಂಕಾರದಿಂದ ಜನರಿಗೆ ಉಪಯೋಗವಾಗಬೇಕು ಎನ್ನುವ ಉದ್ದೇಶದಿಂದ ಮಾತ್ರೆಗಳನ್ನು ಬಳಸಿ ಆಲಂಕಾರ ಮಾಡುವ ಯೋಜನೆಯನ್ನು ಕೈಗೆತ್ತುಕೊಳ್ಳಲಾಯಿತು. 3 ಲಕ್ಷ ಮಾತ್ರೆ, 10 ಸಾವಿರ ಮಾಸ್ಕ್‌, 2 ಸಾವಿರ ಸ್ಯಾನಿಟೈಸರ್‌ ಹಾಗೂ ರೇಷನ್‌ ಕಿಟ್ ನಲ್ಲಿ ಇರುವಂತಹ ಪದಾರ್ಥಗಳಿಂದ ಆಲಂಕಾರ ಮಾಡಿದ್ದೇವೆ. ಸುಮಾರು 4 ದಿನಗಳ ಕಾಲ ತಯಾರಿ ನಡೆಸಿದ್ದು, ಒಂದು ವಾರಗಳ ನಂತರ ಇಲ್ಲಿ ಬಳಸಲಾಗಿರುವ ಎಲ್ಲಾ ರೀತಿಯ ವಸ್ತುಗಳನ್ನು ಅಗತ್ಯವಿರುವ ಜನರಿಗೆ ನೀಡಲಿದ್ದೇವೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕರು ಹಾಗೂ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದ ಟ್ರಸ್ಟಿ ರಾಮ ಮೋಹನ ರಾಜ್‌ ತಿಳಿಸಿದರು.

Unique decoration 1
Unique decoration in the temple using facemasks, sanitizers and tablets

ಈ ವಿಶೇಷ ಅಲಂಕಾರವನ್ನು ಕಂಡು ಸಂಸದ ತೇಜಸ್ವೀ ಸೂರ್ಯ ಶ್ಲಾಘಿಸಿದರು. ಲಕ್ಷಾಂತರ ರೂಪಾಯಿಗಳನ್ನು ಖರ್ಚುಗೊಳಿಸಿ ಹಾಳಾಗುವಂತಹ ವಸ್ತುಗಳನ್ನು ಬಳಸಿ ಆಲಂಕಾರ ಮಾಡಿದರೆ ಅದರಿಂದ ಉಪಯೋಗವಾಗುವುದಿಲ್ಲ. ಇಂತಹ ವಿಭಿನ್ನ ಆಲೋಚನೆಯಿಂದಾಗಿ ಆಲಂಕಾರವೂ ಆಗುತ್ತದೆ ಹಾಗೆಯೇ ನಂತರ ಅದರ ಸದುಯೋಗವೂ ಆಗುತ್ತದೆ. ಈ ನಿಟ್ಟಿನಲ್ಲಿ ವಿಭಿನ್ನ ಆಲೋಚನೆ ಮಾಡಿರುವ ಮಾಜಿ ಉಪಮಹಾಪೌರರಾದ ರಾಮ ಮೋಹನ ರಾಜ್‌ ಅವರ ಕಾರ್ಯ ಶ್ಲಾಘನೀಯ ಎಂದರು.

ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತೆ ಕವಿತಾ ಮಾತನಾಡಿ, ಲಾಕ್‌ಡೌನ್‌ ನಲ್ಲಿ ಮನೆಯಿಂದ ಹೊರಗೆ ಹೋಗದೆ ಬಹಳಷ್ಟು ಬೇಸರಕ್ಕೀಡಾಗಿದ್ದೇವು. ಲಾಕ್‌ಡೌನ್‌ ಸಡಲಿಕೆ ಗೊಂಡ ನಂತರ ಇಂತಹ ವಿಭಿನ್ನ ಆಲೋಚನೆಯ ಆಲಂಕಾರ ಮಾಡಿರುವ ದೇವಸ್ಥಾನಕ್ಕೆ ಭೇಟಿ ನೀಡದ್ದು ಸಂತಸವಾಯಿತು ಎಂದು ಹೇಳಿದರು.

Unique decoration 3

Accident: Sindagi CPI Ravi Ukkund, his wife died on the spot

Kalaburgi: Sindagi Circle Inspector Ravi Ukkund, 43, and his wife Madhu, 40, were killed on the spot after the car in which they were...

Akhil’s body found, postmortem is going on

Hubballi: Finally, the police have found the dead boy of Akhil Mahajanshet in a sugarcane field in Devikoppa, near Kalaghatagi, said local sources. And...

LEAVE A REPLY

Please enter your comment!
Please enter your name here

This is the title of the web page
This is the title of the web page