spot_img
spot_img
21.6 C
Hubli
Tuesday, October 4, 2022
HomeKannada ಕಾಣೆಯಾದ ಮಹಿಳೆಯು ಇಂದು ಮದುಮಗಳಾಗಿ ಪ್ರತ್ಯಕ್ಷ; ಇನ್ಸ್‌ಪೆಕ್ಟರ್‌ ಕಾಲಿಮಿಚಿ೯ ಸಮ್ಮುಖದಲ್ಲಿ ನವಜೋಡಿಗೆ ಎರಡು ಕುಟುಂಬಗಳ ಆಶಿವಾ೯ದ.

 ಕಾಣೆಯಾದ ಮಹಿಳೆಯು ಇಂದು ಮದುಮಗಳಾಗಿ ಪ್ರತ್ಯಕ್ಷ; ಇನ್ಸ್‌ಪೆಕ್ಟರ್‌ ಕಾಲಿಮಿಚಿ೯ ಸಮ್ಮುಖದಲ್ಲಿ ನವಜೋಡಿಗೆ ಎರಡು ಕುಟುಂಬಗಳ ಆಶಿವಾ೯ದ.

ಹುಬ್ಬಳ್ಳಿ: ಗೋಕುಲ್ ಠಾಣೆಯ ಇನ್ಸ್‌ಪೆಕ್ಟರ್‌ ಜೆ.ಎಂ. ಕಾಲಿಮಿಚಿ೯ ತಮ್ಮ ಸಮಾಜಮುಖಿ ಕಾಯ೯ಗಳಿಂದಲೇ ಚಿರಪರಿಚಿತ. ಜನಸ್ನೇಹಿ, ಪರಿಸರ ಸ್ನೇಹಿ ಇನ್ಸ್‌ಪೆಕ್ಟರ್‌ ಇಂದು ಹೊಸದಾಗಿ ಮದುವೆಯಾದ ಜೋಡಿಗೆ ಶುಭ ಹಾರೈಸಿದ್ದಾರೆ. ಅಂತರ್‌ಜಾತಿ ವಿವಾಹಿತ ಜೋಡಿಯ ಕುಟುಂಬಗಳ ಕಗ್ಗಂಟು ತಮ್ಮ ಠಾಣೆಯಲ್ಲಿ ಬಗೆಹರಿಸಿ ಸುಖಾಂತ್ಯ ಮಾಡಿದ್ದಾರೆ.

ಎರಡು ಕುಟುಂಬದ ಸದಸ್ಯರನ್ನು ತಮ್ಮ ಠಾಣೆಗೆ ಕರೆಯಿಸಿ ನವಜೋಡಿಗೆ ಯಾವುದೇ ತೊಂದರೆಯಾಗಬಾರದು, ಇಬ್ಬರು ವಯಸ್ಕರು ತಮ್ಮ ಇಚ್ಛೆಯ ಪ್ರಕಾರ ಮದುವೆ ಯಾಗಿದ್ದಾರೆ ಅವರನ್ನ ಅವರ ಪಾಡಿಗೆ ಬದುಕಲು ಬಿಡಿ ಎಂದು ಎರಡು ಕುಟುಂಬಗಳಿಗೆ ಮನವೊಲಿಸಿದ್ದಾರೆ. ಹುಡುಗನ ಕಡೆಯವರು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಆದರೆ ಹುಡುಗಿಯ ಕಡೆಯವರು ಇನ್ನು ಗೊಂಯಗುಡುತ್ತಿದ್ದಾರೆ. ಆದಷ್ಟು ಶೀಘ್ರ ಅವರು ಈ ಮದುವೆಯನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ಭರವಸೆ ಕಾಲಿಮಿಚಿ೯ ಅವರದ್ದು.

ಏನಿದು ಘಟನೆ: ಶಿಲ್ಪಾ ಕುರಿ 21 ವರ್ಷ ಇವರು ದಿನಾಂಕ: 25.06.2021 ರಂದು ಬೆಳಗಿನ 6.30 ಗಂಟೆಯಿಂದ 7.45 ಗಂಟೆಯ ನಡುವಿನ ಅವಧಿಯಲ್ಲಿ ತಾನು ವಾಸವಾಗಿರುವ ಮನೆಯಲ್ಲಿ ಯಾರಿಗೂ ಏನೂ ಹೇಳದೇ ಕೇಳದೇ ಕಾಣೆಯಾಗಿ ಹೋದ ಬಗ್ಗೆ ಹುಬ್ಬಳ್ಳಿ ಗೋಕುಲ ರೋಡ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ : 92/2021 ಕಲಂ. ಮಹಿಳೆ ಕಾಣೆ ನೇದ್ದರಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾಣೆಯಾದ ಶಿಲ್ಪಾ ನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಇತಳು ಮಂಜುನಾಥ ಉಣಕಲ್ ಎಂಬುವವನೊಂದಿಗೆ ಮದುವೆಯಾದ ಬಗ್ಗೆ ವಿಷಯ ತಿಳಿಸಿ, ಇಂದು ಠಾಣೆಗೆ ಬಂದಿದ್ದರು ಎರಡು ಕಡೆ ವಾದ ವಾಗ್ವಾದದ  ನಂತರ ಇಬ್ಬರ ಪಾಲಕರ ಸಮಕ್ಷಮ ಠಾಣೆಯಲ್ಲಿ ಇಬ್ಬರಿಗೂ ಶುಭ ಹಾರೈಸಿ ಕಳುಹಿಸಲಾಯಿತು.

spot_img

Son dies at Garba event, shocked dad passes away hours later

A 35-year-old man died of a heart attack while attending a Garba event in Maharashtra. His dad, who had rushed him to the hospital,...

Keshwapur police nab two accused, seize two bikes

Hubballi: The Keshwapur police have nabbed two accused on charges of lifting bikes. The police seized one Splendor and one Hero Honda Hunk from...

LEAVE A REPLY

Please enter your comment!
Please enter your name here

This is the title of the web page
This is the title of the web page