19 C
Hubli
Sunday, January 23, 2022
HomeHubballi / Dharwadಧಾರವಾಡ ಜಿಲ್ಲೆಯ ಕೆಂಪು ಮೆಣಸಿಕಾಯಿ ವಿಮೆ ಮಾಡಿಸಿದ ರೈತರಿಗೆ 2021ರ ಮುಂಗಾರು ಹಂಗಾಮಿನ ಮಧ್ಯಂತರ ವಿಮಾ...

Use the Hubli Express app to get Breaking news and headlines. Download now

ಧಾರವಾಡ ಜಿಲ್ಲೆಯ ಕೆಂಪು ಮೆಣಸಿಕಾಯಿ ವಿಮೆ ಮಾಡಿಸಿದ ರೈತರಿಗೆ 2021ರ ಮುಂಗಾರು ಹಂಗಾಮಿನ ಮಧ್ಯಂತರ ವಿಮಾ ಪರಿಹಾರ ಬಿಡುಗಡೆ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಹುಬ್ಬಳ್ಳಿ : ಮಾ. 30, ಧಾರವಾಡ ಜಿಲ್ಲೆಯಲ್ಲಿನ 2021ರ ಮುಂಗಾರು ಹಂಗಾಮಿನ ಕೆಂಪು ಮೆಣಸಿಕಾಯಿ ಬೆಳೆಯ ಮಧ್ಯಂತರ ಬೆಳೆ ನಷ್ಟ ವಿಮಾ ಪರಿಹಾರ (ಒiಜ -Seಚಿsoಟಿ ಂಜveಡಿsiಣಥಿ ಅಟಚಿim) ಒಟ್ಟು 20.69 ಕೋಟಿ ವಿಮೆ ಮೊತ್ತ ರೈತರ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದು ಕೇಂದ್ರ ಸಚಿವ ಶ್ರೀ ಪ್ರಲ್ಹಾದ ಜೋಶಿಯವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಚಿವ ಜೋಶಿ 2021 ನೇ ಸಾಲಿನ ಮುಂಗಾರಿನ ಅವಧಿಯಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದ್ದರಿಂದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ ರೈತರ ಕೃಷಿ ಜಮೀನುಗಳಲ್ಲಿ ಬೆಳೆ ಹಾನಿಯಾಗಿದ್ದು, ಅವುಗಳಿಗೆ ಮಧ್ಯಂತರ ಬೆಳೆ ನಷ್ಟ ವಿಮಾ ಪರಿಹಾರ ಒದಗಿಸುವಂತೆ ರಾಜ್ಯದ ಕೃಷಿ ಮಂತ್ರಿ ಹಾಗೂ ಮುಖ್ಯಮಂತ್ರಗಳಿಗೆ ಕೋರಿಕೋಡಿದ್ದೆ ಅದರಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ರಾಜ್ಯದ ಕೃಷಿ ಆಯುಕ್ತರು ಹಾಗೂ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಕೆಂಪು ಮೆಣಸಿನ ಕಾಯಿ ಬೆಳೆಯನ್ನು ಒiಜ -Seಚಿsoಟಿ ಂಜveಡಿsiಣಥಿ ಅಡಿ ಹಾಗೂ ಇನ್ನುಳಿದ ಬೆಳೆಗಳನ್ನು ಸ್ಥಳೀಯ ನಿರ್ದಿಷ್ಟ ಪ್ರಕೋಪದಡಿ ಸೇರಿಸಿ ಬೆಳೆ ವಿಮೆ ಮಂಜೂರಾತಿಗೆ ಜಿಲ್ಲಾಡಳಿತದಿಂದ ಪ್ರತಿ ಗ್ರಾಮಕ್ಕೆ ಒಬ್ಬ ಸರಕಾರಿ ಅಧಿಕಾರಿ ಹಾಗೂ ವಿಮಾ ಕಂಪನಿಯ ಅಧಿಕಾರಿ ಮತ್ತು ಸ್ಥಳೀಯ ರೈತರು ಸರ್ವೆ ಕಾರ್ಯ ನಡೆಸಿ ಸರ್ವೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಅದರ ವರದಿಯನ್ನು 30 ದಿನಗಳಲ್ಲಿ ರಾಜ್ಯ ಸರಕಾರಕ್ಕೆ ಸಲ್ಲಿಸಿಲು ನಿರ್ದೇಶನ ನೀಡಲಾಗಿತ್ತು.
ಒಟ್ಟು ವಿಮೆ ಮಾಡಿಸಿದ ಕೆಂಪು ಮೆಣಸಿನ ಕಾಯಿ ಬೆಳೆ ಪ್ರದೇಶ ಜಿಲ್ಲೆಯಲ್ಲಿ 13068 ಹೆಕ್ಟೇರ್ ಪ್ರದೇಶವಾಗಿದ್ದು, 12934 ರೈತರು 4.7 ಕೋಟಿ ಪ್ರೀಮಿಯಂ ಭರಣ ಮಾಡಿದ್ದರು. ವಿಮೆ ಮಾಡಿಸಿದ ಎಲ್ಲ ರೈತರುಗಳಿಗೂ ತತ್‍ಕ್ಷಣ ಬೆಳೆ ಪರಿಹಾರ ಬಿಡುಗಡೆ ಮಾಡುವಂತೆ ರಾಜ್ಯ ಸರಕಾರಕ್ಕೆ ಹಾಗೂ ಐಸಿಐಸಿಐ ಲುಂಬಾರ್ಡ ಕಂಪನಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿದ್ದರ ಫಲವಾಗಿ ಜಿಲ್ಲೆಯ ರೈತರಿಗೆ ವಿಮೆ ಮಧ್ಯಂತರ ಪರಿಹಾರ ಬಿಡುಗಡೆಯಾಗಿದ್ದು, ಬಹು ಹಂತದ ಸಂಪೂರ್ಣ ಬೆಳೆ ಕಟಾವು ಸಮೀಕ್ಷೆ ವರದಿ ಸಿದ್ಧಪಡಿಸಿ ಸಲ್ಲಿಸಿದ ನಂತರ ಉಳಿದ ವಿಮೆ ಸಂಪೂರ್ಣ ಮೊತ್ತ ದೊರೆಯುತ್ತದೆ ಹಾಗೂ ಇನ್ನುಳಿದ ಬೆಳೆಗಳ ವಿಮಾ ಬಿಡುಗಡೆಗೆ ಈಗಾಗಲೇ ಕಾರ್ಯೋನ್ಮುಖವಾಗಿದ್ದು ಆ ಬೆಳೆಗಳಿಗೂ ಕೂಡಾ ವಿಮೆ ದೊರೆಯುವ ಆಶಾ ಭಾವನೆ ಹೊಂದಿದ್ದೇವೆ.
ಇಂತಹ ಸಂಕಷ್ಟದ ಸಮಯದಲ್ಲಿ ಅತೀ ಕಡಿಮೆ ಅವಧಿಯಲ್ಲಿ ವಿಮೆ ಹಣ ದೊರಕಿ ರೈತರಿಗೆ ನೆರವಾಗುವಂತಹ ಯೋಜನೆ ರೂಪಿಸಿ ರೈತರ ಬೆನ್ನಿಗೆ ನಿಂತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಅದನ್ನು ಸಕಾರಾತ್ಮಕ ಬದಲಾವಣೆಗಳೊಂದಿಗೆ ಅನುಷ್ಠಾನಗೊಳಿಸುತ್ತಿರುವ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರಿಗೂ ಧನ್ಯವಾದಗಳನ್ನು ಸಚಿವ ಜೋಶಿ ತಿಳಿಸಿದ್ದಾರೆ.

The Hubli Express is on WhatsApp now, you can join the WhatsApp group by clicking the link 

https://chat.whatsapp.com/C6J8Tg5qnmn3zSkcEKOtAd

You can follow us on Facebook @HubliExpress

 

 

The Hubli Express Is On Whatsapp Now, You Can Join The Whatsapp Group By Clicking The Link

Use the Hubli Express app to get Breaking news and headlines. Download now

LEAVE A REPLY

Please enter your comment!
Please enter your name here

error: Content is protected !!